
ಉಡುಪಿ: 20220-21ರ ಶೈಕ್ಷಣಿಕ ವರ್ಷದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ನಡೆಸಿದ ರಾಜ್ಯದ ಸಮಗ್ರ ಆಯುರ್ವೇದ ವಿದ್ಯಾರ್ಥಿಗಳ ಬಿ.ಎ.ಎಮ್.ಎಸ್. (BAMS) ಸ್ನಾತಕ ವಾರ್ಷಿಕ ಪರೀಕ್ಷೆಯಲ್ಲಿ ಎಸ್.ಡಿ.ಎಂ. ಆಯುರ್ವೇದ ಕಾಲೇಜು, ಉಡುಪಿಯ ವಿದ್ಯಾರ್ಥಿಗಳು 4 ರಾಂಕ್ ಗಳಿಸುವ ಮೂಲಕ ಪ್ರಶಂಸನೀಯ ಸಾಧನೆಯನ್ನು ಮಾಡಿದ್ದಾರೆ.
ಪ್ರಥಮ ಬಿ.ಎ.ಎಮ್.ಎಸ್. ಅಂತಿಮ ಪರೀಕ್ಷೆಯಲ್ಲಿ ಸನತ್ಕುಮಾರ್ ಎಸ್. ರವರು 6ನೇ ರಾಂಕ್,
ದ್ವಿತೀಯ ಬಿ.ಎ.ಎಮ್.ಎಸ್. ಅಂತಿಮ ಪರೀಕ್ಷೆಯಲ್ಲಿ ಕು. ಶುಭ ಎಸ್. ಭಟ್ 4ನೇ ರಾಂಕ್ , ಕು. ರಾಜೇಶ್ವರಿ ಎಸ್. ಆಚಾರ್ಯ 7ನೇ ರಾಂಕ್ , ಕು. ರಮ್ಯ ಎಸ್. 9ನೇ ರಾಂಕ್ ಹಾಗೂ ಕು. ಮಹತಿ ಎಮ್. ಛಾತ್ರ 10 ನೇ ರಾಂಕ್ ಗಳಿಸಿರುತ್ತಾರೆ.
ತೃತೀಯ ಬಿ.ಎ.ಎಮ್.ಎಸ್. ಅಂತಿಮ ಪರೀಕ್ಷೆಯಲ್ಲಿ ಕು. ರಾಜೇಶ್ವರಿ ಎಸ್. ಆಚಾರ್ಯ 1ನೇ ರಾಂಕ್ , ಕು. ಪಲ್ಲವಿ ಎನ್.ಎಮ್. 3ನೇ ರಾಂಕ್ , ಕು. ದಾಕ್ಷಾಯಣಿ ಆರ್ 4ನೇ ರಾಂಕ್ , ಕು. ಐಶತ್ ಮೋನಾ ಕೆ.ಪಿ.6ನೇ ರಾಂಕ್ , ಕು. ರಮ್ಯ ಎಸ್. 7ನೇ ರಾಂಕ್ , ಕು. ನೇಹ ಆರ್. ಪಾಟೀಲ್ 8ನೇ ರಾಂಕ್ , ಕು. ಪ್ರಿಯಾಂಕ ವೈ 9ನೇ ರಾಂಕ್ ಹಾಗೂ ಕು. ಬಿಂದಿಯಾ 10ನೇ ರಾಂಕ್ ಗಳಿಸಿರುತ್ತಾರೆ.
ನಾಲ್ಕನೇ ಬಿ.ಎ.ಎಮ್.ಎಸ್. ಅಂತಿಮ ಪರೀಕ್ಷೆಯಲ್ಲಿ ಕು. ಶುಭ ಎಸ್. ಭಟ್ 4ನೇ ರಾಂಕ್ , ಕು. ಬಿಂದಿಯಾ 6ನೇ ರಾಂಕ್ ಹಾಗೂ ಕು. ರಾಜೇಶ್ವರಿ ಎಸ್. ಆಚಾರ್ಯ 8ನೇ ರಾಂಕ್ ಗಳಿಸಿರುತ್ತಾರೆ.
ಪ್ರಶಂಸನೀಯ ಸಾಧನೆಗಾಗಿ ಎಸ್.ಡಿ.ಎಮ್. ಎಜ್ಯುಕೇಶನಲ್ ಸೊಸಾಟಿ, ಉಜಿರೆ ಇದರ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಸಂಸ್ಥೆಯ ಉಪಾಧ್ಯಕ್ಷರು, ಕಾರ್ಯದರ್ಶಿಯವರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದದವರು ರಾಂಕ್ ಪಡೆದ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದ್ದಾರೆ.