ಆರೋಗ್ಯಭಾರತಿಯ ರಾಷ್ಟ್ರೀಯ ಅಧ್ಯಕ್ಷರಾದ ಮತ್ತು ಆರ್ಯಭಟ ಪ್ರಶಸ್ತಿ ಪುರಸ್ಕೃತರಾದ ಡಾ. ರಾಕೇಶ ಪಂಡಿತ್ ಅವರು ಉಡುಪಿ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿಗೆ ಭೇಟಿ ನೀಡಿದರು .ಅವರೊಡನೆ ಆರೋಗ್ಯಭಾರತಿಯ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಸದಾಶಿವ ಜೀ ಮತ್ತು ಮಂಗಳೂರು ವಿಭಾಗ ಸಂಯೋಜಕ್ ಪುರುಷೋತ್ತಮ ಗೌಡ ದೇವಸ್ಯ, ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಭಟ್, ಸಹ ಕಾರ್ಯದರ್ಶಿ ಕೃಷ್ಣರಾಜ ಸಾಮಗ ಮತ್ತು ಡಾ. ಸದಾನಂದ ಭಟ್ ಅವರಿದ್ದರು . ಅತಿಥಿಗಳನ್ನು ಮೆಡಿಕಲ್ ಸುಪರಿಡೆಂಟ್ ನಾಗರಾಜ್ ಎಸ್ ಮತ್ತು ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ, ಪಿ ಆರ್ ಓ ಜಯಪ್ರಕಾಶ್ , ರತ್ನಶ್ರೀ ಆರೋಗ್ಯಧಾಮದ ಡಾ. ದೀಪಕ್ ಸ್ವಾಗತಿಸಿದರು .ನಂತರ ಡಾ .ರಾಕೇಶ್ ಪಂಡಿತ್ ಅವರು ಕಾಲೇಜಿನ ಪ್ರಾಂಶುಪಾಲೆ ಮತ್ತು ಬೋಧಕ ಸಿಬ್ಬಂದಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.


