
ಭಟ್ಕಳದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ವತಿಯಿಂದ ಉಚಿತ ಆಯುರ್ವೇದ ವೈದ್ಯಕೀಯ ತಪಾಸಣಾ ಶಿಬಿರ ತಾರೀಕು 27 ಜೂನ್ 2022 ಸೋಮವಾರದಂದು ಭಟ್ಕಳದ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ಸಭಾಂಗಣದಲ್ಲಿ ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, ಭಟ್ಕಳ ವಿಕಾಸ ಸಮೀತಿ ಹಾಗೂ JCI ಭಟ್ಕಳ ಇವರ ಪ್ರಾಯೋಜಕತ್ವದಲ್ಲಿ ಸಾರ್ವಜನಿಕರಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ನುರಿತ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಒಟ್ಟು 150 ಸ್ಥಳೀಯ ಸಾರ್ವಜನಿಕರು ಉಚಿತ ತಪಾಸಣೆಗೆ ಒಳಪಟ್ಟು ಒಂದು ವಾರದ ಔಷಧಿಗಳ ವಿತರಣೆಯೊಂದಿಗೆ ಅನುಕೂಲವನ್ನು ಪಡೆದುಕೊಂಡಿರುತ್ತಾರೆ. ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾದ ಪ್ರೊಫೆಸರ್ ಡಾಕ್ಟರ್ ಮಮತಾ ಕೆ.ವಿ ದೀಪ ಬೆಳಗಿಸಿ ಉದ್ಘಾಟಿಸಿದರು. ಭಟ್ಕಳ ವಿಕಾಸ ಸಮಿತಿಯ ಅಧ್ಯಕ್ಷರಾದ ಶ್ರೀ ಕೃಷ್ಣಾನಂದ ಪ್ರಭು ಅಧ್ಯಕ್ಷತೆ ವಹಿಸಿಕೊಂಡಿದ್ದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ರೊ. ಮಹೇಂದ್ರ ಶೆಟ್ಟಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ರಾದ ಪ್ರೊಫೆಸರ್ ಡಾಕ್ಟರ್ ನಾಗರಾಜ್, JCI SEN ಅಬ್ದುಲ್ ಜಬ್ಬರ್ ಸಾಬ್, ಜೆಸಿಐ ಭಟ್ಕಳ ಸಿಟಿ ಇದರ ಅಧ್ಯಕ್ಷ JC ಪಾಂಡುರಂಗ ನಾಯಕ್, ಜೆಸಿಐ ಭಟ್ಕಳ ಸಿಟಿಯ ನಿಕಟ ಪೂರ್ವ ಅಧ್ಯಕ್ಷ JC ಸತೀಶ್ ಪೂಜಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಡಾಕ್ಟರ್ ಮಮತಾ ಕೆವಿ ಹಾಗೂ ಡಾಕ್ಟರ್ ನಾಗರಾಜ್. ಎಸ್ ಇವರುಗಳ ಆಯುರ್ವೇದದಲ್ಲಿ ನೀಡಿರತಕ್ಕಂತ ಕೊಡುಗೆ ಹಾಗೂ ಮಹೋನ್ನತ ಸಾಧನೆಗಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.