ಆರೋಗ್ಯ ಭಾರತಿ ಉಡುಪಿ ಮತ್ತು ಮಹಿಳಾ ಮಂಡಳಿಗಳ ಸಹಭಾಗಿತ್ವದಲ್ಲಿಉಡುಪಿಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶ್ರೀ ಭುವನೆಂದ್ರ ಮಂಟಪದಲ್ಲಿ ಉದ್ಯಾವರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ಡಾ. ವಿದ್ಯಾ ಬಲ್ಲಾಳ್ ಮತ್ತು ತಂಡದವರಿಂದ ಮಹಿಳೆಯರಿಗೆ ಸ್ತನ ಮತ್ತು ಗರ್ಭಾಶಯ ಕೊರಳಿನ ಕ್ಯಾನ್ಸರ್ ಬಗ್ಗೆ ಜಾಗೃತಿ ಶಿಬಿರ ನಡೆಸಲಾಯಿತು .ಶ್ರೀ ದೇವಸ್ಥಾನದ ಧರ್ಮದರ್ಶಿ ಅಲೆವೂರು ಗಣೇಶ ಕಿಣಿ, ಆರೋಗ್ಯ ಭಾರತಿಯ ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ ಭಟ್ , ಭಗಿನಿ ವೃಂದ ದ ಅಧ್ಯಕ್ಷೆ ಶಾಂಭವಿ ಕಾಮತ್, ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷೆ ಸುಧಾ ಶೆಣೈ ,ಶೈಲಜಾ ಪೈ, ಮೈತ್ರಿ ಪ್ರಭು, ಕರುಣಾ ಸುರೇಶ ಪೈ, ಅಶ್ವಿನಿ ಪೈ,ಸುಜಾತಾ ಕಿಣಿ , ಅರುಣಾ ಶೆಣೈ,ಡಾ ಪ್ರೀತಿ ಹೆಗ್ಡೆ, ಡಾ ಶ್ರೀವಲ್ಲಿ, ಡಾ ದಿವ್ಯಾ,ಸಂಧ್ಯಾ , ಮಮತಾ ಮುಂತಾದವರು ಭಾಗವಹಿಸಿದರು . ಕ್ಯಾನ್ಸರ್ ಮಾಹಿತಿ ನೀಡಿದ ಡಾ.ವಿದ್ಯಾ ಬಲ್ಲಾಳ್ ಸಂವಾದದಲ್ಲಿ ಸಭಿಕರ ಸಂದೇಹಗಳಿಗೆ ಉತ್ತರಿಸಿದರು. ನಂತರ 20 ಮಹಿಳೆಯರು ಕ್ಯಾನ್ಸರ್ ತಪಾಸಣೆ ಮಾಡಿಸಿ ಕೊಂಡರು



