ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ,ರತ್ನಶ್ರೀ ಆರೋಗ್ಯಧಾಮ ಕುತ್ಪಾಡಿ ಇಲ್ಲಿ ದಿನಾಂಕ ೨೯/೦೭/೨೦೨೨ ರಂದು ಭಾರತೀಯ ಜೀವವಿಮಾನಿಗಮದ ಸ್ವರ್ಣಮಹೋತ್ಸವ ಫ಼ೌಂಡೇಶನ್ ಪ್ರಾಯೋಜಕತ್ವದಲ್ಲಿ ನೂತನವಾಗಿ ಶಾಲಕ್ಯತಂತ್ರ ವಿಭಾಗದ ಕಣ್ಣಿನ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸ ಘಟಕವನ್ನು ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಲ್ ಐ ಸಿ , ಎಂ .ಡಿ .ಎಂ ಆಗಿರುವ ಶ್ರೀ ರಾಜೇಶ್ ಮುಧೋಳ್ ಮಾರುಕಟ್ಟೆ ಪ್ರಭಂಧಕ ಶ್ರೀ ರಮೇಶ್ ಭಟ್, ಅಧಿಕಾರಿಗಳಾದ ಶ್ರೀ ಆರ್ ಎನ್ ಸಾಮಗ, ಶ್ರೀ ಸದಾಶಿವ ಹಾಗೂ ಶ್ರೀ ಮೋಹನ್ ದಾಸ್ , ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ ವಿ, ವೈದ್ಯಕೀಯ ಅಧೀಕ್ಷರಾದ ಡಾ.ನಾಗರಾಜ್ ಎಸ್, ಉಪ ವೈದ್ಯಕೀಯ ಅಧೀಕ್ಷರಾದ ಡಾ. ದೀಪಕ್ ಎಸ್ ಎಮ್ , ಎಸ್ ಡಿ ಎಮ್ ಫಾರ್ಮಸಿಯ ನಿರ್ಧೇಶಕರಾದ ಡಾ.ಮುರಳೀಧರ್ ಬಲ್ಲಾಳ್ , ಕಣ್ಣಿನ ಶಸ್ತ್ರತಜ್ಞ ರಾದ ಡಾ.ರೂಪಶ್ರೀ ರಾವ್ ಹಾಗೂ ಡಾ.ಹರಿಪ್ರಸಾದ್ ಓಕುಡ, ಶ್ರೀಹರಿ
ನೇತ್ರಾಲಯ ಅಂಬಲಪಾಡಿ ಹಾಗೂ ಶಾಲಾಕ್ಯ ತಂತ್ರ ವಿಭಾಗದ ವೈದ್ಯರಾದ ಡಾ. ಗಾಯತ್ರಿ ಜಿ ಹೆಗ್ಡೆ ಮತ್ತು ಡಾ. ಸುಷ್ಮಪ್ರಶಾಂತ್ ಉಪಸ್ಥಿತರಿದ್ದರು.
ಅಧಿಕಾರಿಗಳಾದ ಶ್ರೀ ರಾಜೇಶ್ ಮುಧೋಳ್ ಹಾಗೂ ಶ್ರೀ ರಮೇಶ್ ಭಟ್, ಇವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಸ್ವರ್ಣ ಮಹೋತ್ಸವದ ಫ಼ೌಂಡೇಶನ್ ಅನ್ನು ೨೦೦೬ರಲ್ಲಿ ಸ್ಥಾಪಿಸಲಾಯಿತು ಹಾಗೂ ಶಿಕ್ಷಣ, ಆರೋಗ್ಯ, ಬಡತನ ಹಾಗೂ ಸಂಕಷ್ಟ ಪರಿಹಾರದಂತ ಕಾರ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ನಿಯೋಜಿಸಲಾಯಿತು ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ. ಮಮತಾ ಕೆ ವಿ, ಹಾಗೂ ವೈದ್ಯಕೀಯ ಅಧೀಕ್ಷರಾದ ಡಾ.ನಾಗರಾಜ್ ಎಸ್ ರವರು ಹಿತವಚನ ನೀಡಿದರು. ಡಾ.ಪಲ್ಲವಿ ಸ್ನಾತಕೋತ್ತರ ವಿಧ್ಯಾರ್ಥಿನಿ ಕಾರ್ಯಕ್ರಮವನ್ನು ನಿರೂಪಿಸಿದರು.ಎಸ್ ಡಿ ಎಮ್ ಆಯುರ್ವೇದ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಶಾಲಾಕ್ಯ ತಂತ್ರ ನೇತ್ರ ಘಟಕವು ಆಧುನಿಕ ರೋಗಿ ಪರೀಕ್ಷಾ ಉಪಕರಣಗಳನ್ನು ಹೊಂದಿದ್ದು ಅದರೊಂದಿಗೆ ಸುಸಜ್ಜಿತವಾದ ನೇತ್ರ ಶಸ್ತ್ರಾಗಾರವನ್ನು ಒಳಗೊಂಡಿದೆ. ಇಲ್ಲಿ ಮುಖ್ಯವಾಗಿ ಕಣ್ಣಿನಪೊರೆಯ ಚಿಕಿತ್ಸೆಯನ್ನು ಕಡಿಮೆದರದಲ್ಲಿ ಬಡ ಜನರಿಗೆ ಪ್ರಯೋಜನಕಾರಿಯಾಗುವ ಪ್ರಮುಖ ಉದ್ದೇಶದಿಂದ ಪ್ರಾರಂಬಿಸಲಾಗಿದೆ. ಇಲ್ಲಿ ಕಂಪ್ಯೂಟರ್ ನಿಂದ ಉಂಟಾಗುವ ದೃಷ್ಟಿ ಸಮಸ್ಯೆಗಳು , ದೂರ ಹಾಗೂ ಹತ್ತಿರದ ದೃಷ್ಟಿದೋಷ, ಸಕ್ಕರೆ ಖಾಯಿಲೆ ಸಂಬಂಧಿತ ದೃಷ್ಟಿಹಾಗೂ ಇನ್ನಿತರ ರೆಟಿನ ಸಂಬಂದಿತ ಕಣ್ಣಿನ ಸಮಸ್ಯೆಗಳಿಗೆ ಸೂಕ್ತ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಗತ್ತದೆ.